"ಎಂದೆಂದಿಗೂ ನಿನ್ನ ನೆನಪುಗಳು ನಮ್ಮೊಂದಿಗೆ" ನನ್ನೆದುರು ಇದ್ದ ಗೋರಿಕಲ್ಲಿನ ಮೇಲೆ ಕೆತ್ತಲ್ಪಟ್ಟಿತ್ತು. ಅಂತ್ಯಸಂಸ್ಕಾರ ಮುಗಿದು ಗಂಟೆಗಳೇ ಕಳೆದು ಹೋಗಿದ್ದರೂ ನಾನಿನ್ನೂ ಮನೆಗೆ ಮರಳದೇ ಅಲ್ಲೇ ನಿಂತಿದ್ದೆ. ನೀನು ನನಗೆ ತುಂಬಾನೇ ಸ್ಪೆಶಲ್. ನೀನೇ ತಾನೇ ನನಗೆ ಲೈಫ್ ಅಂದ್ರೆ ಏನು ಅಂತ realize ಆಗೋ ಹಾಗೆ ಮಾಡಿದ್ದು. ಈ ಪ್ರಪಂಚ ಮೇಲಿನಿಂದ ನೋಡೋಕೆ ಮಾತ್ರ ಬಣ್ಣದ ಬುಗರಿ. ಆದ್ರೆ ಇಂದೊಂದು ಕತ್ತಲೆಯ ಕೂಪ. ಅದರಲ್ಲಿ ನೀನು ಒಮ್ಮೆ ಬೀಳತೊಡಗಿದೆ. ಯಾರು ನಿನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುವವರೇ. ನೀನು ಆ ಕಂದಕಕ್ಕೆ ಹಾರಿದೆ. ನೀನು ನನ್ನನು ಕೈಹಿಡಿದು ಎತ್ತಲು ನೋಡಿದೆ. ಸಾಧ್ಯವಾಗಲಿಲ್ಲ. ಉಫ್... ನೀನು ನೆಲವನ್ನು ತಲುಪಿದೆ. But ನಾನು ಬೀಳುತ್ತಲೇ ಇದ್ದೇನೆ. ನನಗಿನ್ನೂ ನೆನಪಿದೆ, First time ನಿನ್ನನ್ನು ನೋಡಿದ್ದು, first ಪಿಯುಸಿಯಲ್ಲಿ, Lecturer ಕಾರಿಡಾರಿನಲ್ಲಿ ನಿಲ್ಲಿಸಿಕೊಂಡು ನಿನ್ನನ್ನು ಬೈಯುತ್ತಿರಬೇಕಾದರೆ. ನೀನು ತಲೆ ಕೆಳಗೆ ಮಾಡಿಕೊಂಡು ಅವಮಾನವಾದಂತೆ ನೆಲವನ್ನು ನೋಡುತ್ತಾ ನಿಂತಿದ್ದೆ. ಆದರೆ ಅಲ್ಲಿಂದ ಮರೆಯಾದ ಕೂಡಲೇ ಹಾಸ್ಯ ಮಾಡುತ್ತಾ ನಗತೊಡಗಿದ್ದೆ. ನನಗೆ ನಿನ್ನ ಈ behaviour ನೋಡಿ ತುಂಬಾ ಆಶ್ಚರ್ಯವಾಗಿತ್ತು. ನಾನು ನೀನ್ನನ್ನೇ ನೋಡುತ್ತಾ ನೋಡುತ್ತಾ ನಿಂತು ಬಿಟ್ಟಿದ್ದೆ. ನೀನು ನನ್ನನ್ನುನೋಡಿದೆ. ಔಚ್.. ನಾನು ಸಿಕ್ಕಿಹಾಕಿಕೊಂಡು ಬಿಟ್‌ನಲ್ಲ ಅಂತ ಯೋಚಿಸ್ತಿರಬೇಕಾದ್ರೆ ನೀನೇ ನಗುತ್ತಾ ಕೈಯನ್ನು ನನ್ನತ್ತ ಆಡಿಸಿ "Hiii..." ಎಂದೆ. ನಾನು ಕ್ಲಾಸಿನಿಂದ ಯಾವತ್ತೂ ಹೊರಗಡೆ ಬಂದು ನಿಲ್ಲುತ್ತಿರಲಿಲ್ಲ. Lecturers ನೋಡಿದ್ರೆ ಎನ್ನುವ ಭಯ. ಆದರೆ ಸಮ್ಮೋಹನಗೊಳಿಸುವ ನಿನ್ನ ಮುಖ ಆ ದಿನ ನಿನ್ನನ್ನೇ ನೋಡುತ್ತಾ ನಿಲ್ಲುವಂತೆ ಮಾಡಿತ್ತು. ಎಲ್ಲರೂ ಮುಗುಳುನಗುತ್ತಾರೆ. ಆದರೆ ಕೆಲವರಿಗೆ ಮಾತ್ರ ಗೊತ್ತು ಬೇರೆಯವರನ್ನು ಆ ನಗುವಿನಿಂದ ಸೆಳೆಯುವ ರಹಸ್ಯ. ಆ ನಗು ನನ್ನನ್ನು ಸೆಳೆದಿತ್ತು. ನಾನು ಕೂಡ ನಿನ್ನತ್ತ ಕೈ ಬೀಸಿದೆ. ಇದಾದ ಮೇಲೆ ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಿದ್ದು ತುಂಬಾನೇ ಕಡಿಮೆ. ನೀನೇ ಬೇರೆ branch, ನಾನೇ ಬೇರೆ. ಆದರೂ ಪ್ರತಿದಿನ ನಾನು ನಿನ್ನ ನಗುವನ್ನು ನೋಡಲು ಹಾತೊರೆಯುತ್ತಲೆ ಇದ್ದೆ. Second Yearನಲ್ಲಿ ನಮ್ಮಿಬ್ಬರ ಸ್ನೇಹ ಬೆಳೆಯುತ್ತಾ ಬಂದಿತು. Lunch Breakನಲ್ಲಿ ನಿನ್ನ ಸ್ನೇಹಿತರ ಜೊತಗೂಡಿ ನನ್ನನ್ನು ಭೇಟಿಯಾಗಲು ಬರುತ್ತಿದ್ದೆ. ಅವರೆಲ್ಲರೂ ನಮ್ಮನ್ನು ನೋಡಿ ಏನೇನೋ ಹಾಸ್ಯ ಮಾಡ್ತಿದ್ದರು. ಕೆಲವೊಂದು ಬಾರಿ ನನ್ನ ಮನೆಯ ಮುಂದೆ ಬಂದು ನನ್ನತ್ತ ನಗುತ್ತಾ ಕೈಬೀಸಿ ಹೋಗುತ್ತಿದ್ದೆ. ಆದರೆ ಆ ನಗು ಬಲವಂತಾಗಿ ಮುಖದ ಮೇಲೆ ಹರಿದಾಡುತ್ತಾ ಇದೆ ಎಂದು ನನ್ನ ಮನಸ್ಸು ಹೇಳುತ್ತಿತ್ತು. ಹಾಗಾದರೆ ಮೊದಲ ಬಾರಿ ಆ ನಗುವನ್ನು ನೋಡಿದಾಗ ನನಗೆ ಆಗಿದ್ದು ಏನು? ನಮ್ಮ ಈ ಸ್ನೇಹಕ್ಕೆ ತಿರುವು ಸಿಕ್ಕಿದ್ದು final exam timeನಲ್ಲಿ. ನಿನ್ನ ಎಲ್ಲರೂ ಓದಿನಲ್ಲಿ ಮುಳುಗಿದ್ದರು. ಆದರೆ ನೀನು ಮಾತ್ರ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ. ಒಂದು ದಿನ ನೀನು ನನ್ನ ಮನೆಗೆ ಬಂದೆ. ನಾನು ಮಾತು ಆರಂಬಿಸುವುದಕ್ಕೂ ಮೊದಲೇ ನಿನ್ನ ಕೆನ್ನೆಯ ಮೇಲೆ ಕಣ್ಣೀರು ನೆಲವನ್ನು ಸೇರುವ ತವಕದಿಂದ ಓಡತೊಡಗಿತ್ತು. ನಾನು ಎಷ್ಟೇ force ಮಾಡಿದರೂ ಮೊದಲು ನೀನು ಕಾರಣ ಏನೆಂದು ಹೇಳಿರಲಿಲ್ಲ. ಕೆಲವು ದಿನಗಳ ನಂತರ ನಿಧಾನವಾಗಿ ಎಲ್ಲವನ್ನೂ ಬಿಡಿಸಿ ಹೇಳಿದ್ದೆ. ನಿನ್ನ ಅಪ್ಪ-ಅಮ್ಮ ಇನ್ನನ್ನು ಬೇರೆ ಮನೆಯಲ್ಲಿ ಬಿಟ್ಟಿದ್ದಾರೆಂದೂ, ಹಣವನ್ನು ಕಳುಹಿಸುತ್ತಾರಾದರೂ ತಂದೆ-ತಾಯಿಯ ಪ್ರೀತಿ ಇರಲಿಲ್ಲವೆಂದು. ನಾನು ಎರಡನೇ ಯೋಚನೆಯೇ ಇಲ್ಲದೆ ನಿನ್ನನ್ನು ಬರಸೆಳೆದು ಅಪ್ಪಿಕೊಂಡಿದ್ದೆ. ಆಗ ನಾನು ಹೇಳಿದ್ದೆ, "ಒಳ್ಳೆಯ marks ತಗೊಂಡ್ರೆ ನಾನು ಯಾವಾಗ್ಲೂ ನಿನ್ನ ಜೊತೇನೇ ಇರ್ತೀನಿ." ಕೆಲವು ನಿಮಿಷಗಳು ಯೋಚಿಸಿದ ನೀನು ಹೇಳಿದೆ, -"You sure? Cause I’m pretty difficult to take care of." ಕೆಲವು ಕ್ಷಣಗಳು ಮೌನ. ನಂತರ ಇದ್ದಕ್ಕಿದ್ದಂತೆಯೇ ಇಬ್ಬರು ನಗಲಾರಂಬಿಸಿದೆವು. ನಿನ್ನೆಡೆಗೆ ಧಿಟ್ಟಿಸಿದಾಗ ನಿನ್ನ ಮುಖದ ಮೇಲೆ ಅದೇ ನಗು, ನನ್ನ ಸೆಳೆಯುವ ಮಾಂತ್ರಿಕ ನಗು. ನಿನ್ನ ಕಿವಿಯ ಬಳಿ ಮೆಲ್ಲಗೆ, 'Promise?' ಎಂದೆ. ಆಗ ನನಗೆ ನಿನ್ನನ್ನು ಪ್ರೀತಿಸುತ್ತಿದ್ದೇನೆಂದು realize ಆಗಿತ್ತು. ಆದರೆ ಆ ಒಂದು promiseನಿಂದಾಗಿ ನಮ್ಮಿಬ್ಬರ ಸ್ನೇಹಕ್ಕೆ ದೊಡ್ಡ ವಿಪತ್ತು ಇದೆಯೆಂದು ನಮಗಾಗ ತಿಳಿಯುವಂತಿರಲಿಲ್ಲ. Final exam result ಬಂತು. ಜ್ವರ ಬಂದಿದ್ದರಿಂದ ನಾನು ಕಾಲೇಜಿಗೆ ಬಂದಿರಲಿಲ್ಲ. ರೊಮ್ಯಾಂಟಿಕ್ ಕಾದಂಬರಿಗಳಲ್ಲಿ ನಡುರಾತ್ರಿ 12:30ಕ್ಕೆ ಬಂದು ಕಿಟಕಿಯನ್ನು ಬಡಿಯುವಂತೆ ಆ ದಿನ ರಾತ್ರಿ ನನ್ನ ರೂಮಿನ ಕಿಟಕಿಯನ್ನು ಬಡಿದಿದ್ದೆ. ನೀನು ಪರೀಕ್ಷೆಯಲ್ಲಿ 99% ಫಲಿತಾಂಶ ಪಡೆದಿದ್ದೆ. ನನಗಾದ ಸಂತೋಷವನ್ನು ಮಾತಿನಲ್ಲಿ ಹೇಳುವುದಕ್ಕೆ ಸಾಧ್ಯವಿರಲಿಲ್ಲ. ನಿನ್ನನ್ನು ಬಲವಾಗಿ ಉಸಿರು ಕಟ್ಟುವಂತೆ ತಬ್ಬಿಕೊಂಡೆ. ನೀನು ಒಮ್ಮೆಲೆ ಮುತ್ತಿಕ್ಕಿದ್ದಾಗ ನನಗೆ ಆಘಾತವಾದರೂ ವಿರೋಧಿಸಲು ಸಾಧ್ಯವಾಗಲಿಲ್ಲ. ನೀನು ನನ್ನಿಂದ ಬಿಡಿಸಿಕೊಂಡು, " ಎಲ್ಲವೂ ನಿನಗೆ ಮಾಡಿದ promise ಉಳಿಸಿಕೊಳ್ಳಲು..." ಎಂದು ಹೇಳಿ ಮನೆಯತ್ತ ಓಡಿ ಹೋಗಿದ್ದೆ. ಇದು ನನ್ನ ಸಂತೋಷದ ದಿನಗಳ ಮೊದಲ ಪುಟ ಎಂದುಕೊಂಡಿದ್ದೆ. ಆದರೆ ಅದೇ ಕೊನೆಯ ದಿನ ಎಂದು ನನಗೆ ಗೊತ್ತಿರಲಿಲ್ಲ. ನೀನು ಕಾನ್ಸೆರ್ ಗೆ ಬಲಿಯಾಗಿದ್ದೆ. ಯಾರಿಗೂ ಇದು ತಿಳಿದಿರಲಿಲ್ಲ. ನನಗೆ ನಿನ್ನ ನಗುವಿನ ಹಿಂದಿನ ನೋವು ಕಾಣಿಸಲೇ ಇಲ್ಲ ಎನ್ನುವುದಕ್ಕಿಂತ ನೀನು ಅದನ್ನು ತೋರಗೋಡಲಿಲ್ಲ. I miss you and you'll wait for me... ಆದರೆ ನಾನು ಹಿಂದೆ ತಿರುಗಿ why ಎನ್ನಲೆ? ಉತ್ತರಿಸುವವರಾರು? ಇಷ್ಟೆಲ್ಲ ನಡೆದರೂ ಯಾರೊಬ್ಬರೂ ಸೊಲ್ಲೆತ್ತಲಿಲ್ಲ. ಇಷ್ಟೆಲ್ಲ ನಿರ್ಲಕ್ಷಕ್ಕೆ ಕಾರಣ ನಾವಿಬ್ಬರೂ "ಹುಡುಗಿಯರು" ಎಂದು ಆಗಿರಬಹುದೇ? ಉತ್ತರ ಹೇಳು ಸಾಧನಾ.. ನಿನ್ನ ಗೆಳತಿ ಚಂದನ ಕೇಳುತ್ತಿದ್ದೀನಿ..