"ನೀವು ನನಗೆ actually ಏನಾಗಿದೆ ಅಂತ ಹೇಳೋದಕ್ಕೆ ಪ್ರಯತ್ನ ಪಡ್ತಿದ್ದೀರ? ಅಂದ್ರೆ ನನಗೆ....?”
"ಹೌದು ಹೌದು. ನಾನು ನಿಮಗೆ already ಹೇಳಿದೀನಿ ಇದು ಹೇಗೆ ಅಂತ", ಎಂದು ತನ್ನ ಹೇಳಿಕೆಯನ್ನು ನನಗೆ ಮನವರಿಕೆ ಮಾಡಿಸಲು ಪ್ರಯತ್ನಿಸುತ್ತಿದ್ದರು ಡಾ. ಅಭಿಷೇಕ್ ನಾಯರ್.
“But, ನಾನು ಹೇಗೆ ನನ್ನ ಪಾಸ್ಟ್ ಲೈಫ್ ನೋಡ್ಲಿಕ್ಕೆ ಸಾಧ್ಯ. ನೆನಪು ಮಾಡ್ಕೋಳ್ ಬಹುದು. ಬಟ್ ರಿಪೀಟ್ ಆಗಿ ಅದೇ ಸೀನ್ ಅಲ್ಲಿ ನಾನೇ ಇರ್ತೀನಿ. ಅದು ಹೇಗೆ ಸಾಧ್ಯ?"
"ಹಾಹಾ. ಸಾಧ್ಯ ಇದೆ. ಏಕಾಗ್ರತೆಯೇ ಇವೆಲ್ಲದಕ್ಕೂ ಮೂಲ. You just need to concentrate. ಅಷ್ಟೇ"
“What?”
"ಇಲ್ಲಿ ಕೇಳಿ. ಈ ಯೋಚನೆ ಎಂಬುದು ಒಂದು ಶಕ್ತಿಯುತವಾದ ಆಯುಧ. ಎವೆರೀ ಥಾಟ್.. ಪ್ರತಿಯೊಂದು ಯೋಚನೆಗೂ ಒಂದು ತೂಕ ಇರುತ್ತೆ. ಆದ್ರೆ ಅದರ ಗಾಢತೆ ನೀವು ಎಷ್ಟು ಆಳವಾದ ಯೋಚನೆಯಲ್ಲಿ ಮುಳುಗಿದ್ದೀರ ಎಂಬುದರ ಮೇಲೆ ಡಿಪೆಂಡ್ ಆಗುತ್ತ್ತೆ. ಸೊ ನಿನಗೆ ಬುದ್ದಿಭ್ರಮಣೆ ಆಗಿದೆ ಅಂತ ಬೇರೆಯವ್ರು ತಿಳಿದುಕೊಳ್ಳೋ ಅಷ್ಟು ಡೀಪ್ ಯೋಚನೆಗೆ ಹೋದ್ರೆ, ಮೇ ಬಿ ಈ ನಿನ್ನ ಸುತ್ತಲಿನ ಪ್ರಪಂಚವನ್ನ ಮರೆತು ನಿನ್ನ ಜಗತ್ತಿನೊಳಗೆ ಹೋಗ್ತೀಯ.”
“ಆದರೆ ಅದು ಬೇರೆ ಯಾವುದೋ ಅಥವಾ ಏನೋ ಇರಬೇಕು."
“Yes, there is. ನಿನ್ನ ಸುತ್ತಲೂ ಪಿನ್ ಡ್ರಾಪ್ ಸೈಲೆನ್ಸ್ ಇರ್ಬೇಕು. ನಿನ್ನ ಯೋಚನೆಗೆ ಕಿಂಚಿತ್ತೂ ಧಕ್ಕೆ ಬರಬಾರ್ದು. Other than this, it’s pretty simple.”, ಎಂದು ನಗುತ್ತಾ ಹೇಳಿದರು. ನನಗೆ ಅವರು ನಗುವುದನ್ನು ನೋಡಿ ತುಂಬಾ ಆಶ್ಚರ್ಯ ಆಯಿತು. ಇದರಲ್ಲಿ ನಗುವುದು ಏನಿದೆ ಅಂತ ಸರಿಯಾಗಿ ಅರ್ಥ ಆಗಲಿಲ್ಲ. ಎಲ್ಲಾ ಭೌತವಿಜ್ಞಾನದ ನಿಯಮಗಳೆಲ್ಲವನ್ನೂ ಸುಳ್ಳು ಮಾಡಿ, ನಾನು ಹೇಗೆ ನನ್ನ ಭೂತಕಾಲಕ್ಕೆ ಹೋಗಲು ಸಾಧ್ಯ. ಇದು ಸಂಪೂರ್ಣವಾಗಿ ಹುಚ್ಚುತನ. A sheer madness, ನನ್ನದೇನ ಅಥವಾ ಡಾಕ್ಟರ್?
“ಡಾಕ್ಟರ್, ಇನ್ನೂ ನನಗೆ ಸಂಶಯ ಇದೆ, ಇದರಲ್ಲಿ ಏನೋ ಸರಿಯಿಲ್ಲ. ನೀವು ನನಗೆ ಹೆಲ್ಪ್ ಮಾಡೋಕೆ ಟ್ರೈ ಮಾಡ್ತಿದೀರಿ ಅಂತ ಗೊತ್ತು. ಆದ್ರೂ ಇದೊಂದು ಮಿಸ್ಟೇಕ್.”
“ನಾನು ನಿನಗೆ already ಎಲ್ಲವನ್ನೂ ವಿವರವಾಗಿ ಬಿಡಿಸಿ ಹೇಳಿದ್ದೀನಿ.”, ಎಂದು ತಮ್ಮ ಬಲಗೈಯನ್ನು ಗಾಳಿಯಲ್ಲಿ ವಿಚಿತ್ರವಾಗಿ ಎರಡು ಸುತ್ತು ಹಾಕಿ ಹೇಳಿದರು.
“ಹಾಗಾದ್ರೆ ಮತ್ತೊಮ್ಮೆ ಹೇಳಿ. ನೀವು ನನಗೆ ತುಂಬಾ ಕನ್ಫ್ಯೂಸ್ ಮಾಡ್ತ ಇದೀರಾ", ನಾನು ತಲೆಯನ್ನು ಕೊಡವುತ್ತಾ ಹೇಳಿದೆ. "ಕೇಳು ಇಲ್ಲಿ. ಅತ್ಯಂತ ಸಂಕೀರ್ಣ ಕಾರ್ಯವಿಧಾನಗಳ ಮೂಲಕ ಕಾಲಯಂತ್ರವನ್ನು ತಯಾರಿಸಲು ನೋಡಿ ವಿಫಲರಾಗಿದ್ದಾರೆ. ಅದು ಮಾಡಲಾಗದ ಕಾರ್ಯವನ್ನ ಒಂದು ಚಿಕ್ಕ ಫೋಟೋ ಜಾಣತನದಿಂದ ಮಾಡುತ್ತೆ. ಅದು ಸಮಯವನ್ನು ತನ್ನ ಚೌಕಟ್ಟಿನಲ್ಲಿ ಹಿಡಿದಿಡುತ್ತೆ. ಅದರಲ್ಲಿ ನಿನ್ನ ಭಾವನೆಗಳನ್ನು ಕೂಡಿಹಾಕುತ್ತೆ. ತನ್ನ ಪಾಡಿಗೆ ತಾನು ಸರಿಯುತ್ತಿರುವ ಸಮಯವನ್ನ, ಮತ್ತೆ ಹಿಂದಿರುಗಿಸಿ ತರಲಾಗದ ಸಮಯವನ್ನ ಈ ಫೋಟೋ ಸೆರೆ ಹಿಡಿಯುತ್ತೆ. ಸೊ ಇದು ನಮ್ಮ ನೆನಪುಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡುವ, ಮತ್ತೆ ಅದೇ ಕಳೆದುಹೋದ ಕಾಲಕ್ಕೆ ಕೊಂಡೊಯ್ಯುವ ಹೆಬ್ಬಾಗಿಲು ಅಂದುಕೊಂಡ್ರೆ ತಪ್ಪಿಲ್ಲ."
ಅವರ ಒಂದೊಂದು ಪದವೂ ವಿವಿಧ ಗೊಂದಲಗಳನ್ನು ನನ್ನಲ್ಲಿ ಹುಟ್ಟುಹಾಕಿತೇ ವಿನಹ ಯಾವುದೇ ರೀತಿಯಲ್ಲೂ ಪರಿಹಾರ ನೀಡಲಿಲ್ಲ. ಅಕ್ಷರಶಃ ಒಂದು ಛಾಯಾಚಿತ್ರವನ್ನು ಪ್ರವೇಶಿಸಲು ಹೇಗೆ ಸಾಧ್ಯ? and go back in time?
"ಈ ಫೋಟೋದಲ್ಲಿ ಹಿಡಿದಿಡಲಾಗಿರುವ ಸಮಯ ಸ್ಥಿರವಾಗಿರಬಹುದು. ಆದರೆ ನಮ್ಮ ಪ್ರಸ್ತುತ ಚೌಕಟ್ಟಿನಲ್ಲಿ ಅದೊಂದು ಗತಿಸಿಹೋದ ಒಂದು ಘಟನೆಯಾಗಿರುತ್ತದೆ ಎಂಬುದು ನೆನಪಿರಲಿ. ಇದನ್ನ ನಾವು ಬೇಕಾದರೆ ಸಮಾನಾಂತರ ಸಮಯದ ಅಳತೆಗಳು ಅಂತ ಬೇಕಾದ್ರೆ ಕರೆಯಬಹುದು. i.e, 2 parallel time dimensions. ಒಂದು, ಈಗ ನಡೆಯುತ್ತಾ ಇರೋದು ಅಂದ್ರೆ ವರ್ತಮಾನ. ಮತ್ತೊಂದು, ಈ ಫೋಟೋದೊಳಗಿನ ಸ್ಥಿರವಾದ ಸಮಯ. And ನಮ್ಮ ಯೋಚನೆಗಳು, ಇವುಗಳು ನಿನಗೆ ಆ ಎರಡು ಸಮಯದ ನಡುವೆ ಸ್ವಿಚ್ ಆಗಲು ಶಕ್ತಿ ನೀಡುತ್ತವೆ."
ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಇದು ನನ್ನ ಬುದ್ದಿಶಕ್ತಿಯ ವ್ಯಾಪ್ತಿಯಲ್ಲಿ, ವೈಜ್ಞಾನಿಕವಾಗಿ ಯೋಚಿಸಲು ಸಾಧ್ಯವಿಲ್ಲವೇನೋ ಅನ್ನಿಸಿತು. ಡಾ. ಅಭಿಷೇಕ್ ಅವರು ತಮ್ಮ ಮಾತಿನ ಮೇಲೆ, ಹಾಗೂ ಪ್ರಚುರ ಪಡಿಸಿದ ಸಿದ್ಧಾಂತದ ಮೇಲೆ ಅತ್ಯಂತ ವಿಶ್ವಾಸವಿರುವಂತೆ ಕಂಡುಬಂದರು. ಈ ಎಲ್ಲಾ ಸಂಕೀರ್ಣ ಸಮರ್ಥನೆಗಳನ್ನು ಕೇಳಿದ ಮೇಲೆ ನನಗೆ ಅನ್ನಿಸಿದ್ದು ಮೊದಲು ಸ್ವಲ್ಪ ವಿಶ್ರಾಂತಿ ಬೇಕಾಗಿದೆ ಅಂತ ಅಷ್ಟೇ.
"ಹಾ. ಮತ್ತೊಂದು ವಿಷಯ", ಹೊರಡಲನುವಾದ ನನ್ನನ್ನು ಅಭಿಷೇಕ್ ತಡೆದರು. "ಹೇಳಿ ಡಾಕ್ಟರ್?"
"ನೀನು ಹಿಂದಿನ ಸಮಯಕ್ಕೆ ಪ್ರಯಾಣಿಸಲು, ನೀನು ಆ ಫೋಟೋದಲ್ಲಿ ಇರಲೇ ಬೇಕು. ಮತ್ತು ಆ ಫೋಟೋ ತೆಗೆದ ಸಮಯ ನೈಜ ಘಟನೆ ನಡೆದ ಸಮಯಕ್ಕೆ ಹೋಲಿಕೆಯಲ್ಲಿ ಇರಬೇಕು. ಹಾಗೆ ಆದಾಗ ಮಾತ್ರ ನಿನ್ನ ತಂದೆಯನ್ನು ಯಾರು ಹತ್ಯೆ ಮಾಡಿದ್ರು ಎಂಬುದು ತಿಳಿಯುತ್ತೆ."
------------- SCENE 2 -----------
ನನ್ನ ಮನೆಯಲ್ಲಿರುವ ಟೆರೇಸ್ನಲ್ಲಿ ನಾನು ನಿಂತಿದ್ದೆ. ಇದು ಸರಿಯಾದ ಸಮಯ, ಸುಮಾರು ಸಂಜೆ 5 ಗಂಟೆ. ಆಕಾಶವು ತುಂಬಾ ಪ್ರಕಾಶಮಾನವಾಗಿದೆ, ತಂಗಾಳಿಯು ತುಂಬಾ ತಂಪಾಗಿದೆ. ಒಂದು ಕ್ಷಣ ನಾನೇಕೆ ಅಲ್ಲಿದ್ದೇನೆ ಎಂಬುದನ್ನೇ ಮರೆತುಬಿಟ್ಟೆ. ಒಂದು ವಾರದ ಹಿಂದೆ ನನ್ನ ತಂದೆಯ ಹತ್ಯೆಯಾದದ್ದುಇದೇ ಸ್ಥಳದಲ್ಲಿ. ಪೊಲೀಸರು ನಿಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೂ ನಾನು ನಂಬಿರಲಿಲ್ಲ. ಏಕೆಂದರೆ ಅವರು ತನ್ನನ್ನು ತಾನು ಕೊಂದುಕೊಳ್ಳುವಂತಹ ವ್ಯಕ್ತಿಗಳ ಸಾಲಿಗೆ ಸೇರಿದವರಾಗಿರಲಿಲ್ಲ. ಅವರು ಪ್ರಬಲವಾದ ತತ್ವಗಳು ಮತ್ತು ಮೌಲ್ಯಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ. ಅವರು ತಮ್ಮ ಬದುಕಿನಲ್ಲಿ ಬಂದಂತಹ ಕಷ್ಟಗಳನ್ನು ಎದುರಿಸಿದ್ದನ್ನು ನೋಡಿದ್ದೇನೆ. ಎಂದೂ ಕೂಡ ಅವರ ಕಣ್ಣಿನಲ್ಲಿ ಭಯವನ್ನು ಕಂಡವನಲ್ಲ. ಇಡೀ ವ್ಯಾಪಾರ ಸಾಮ್ರಾಜ್ಯ, ಮತ್ತು ವಿಶೇಷವಾಗಿ ನನ್ನ ತಾಯಿ ನಿಧನದ ನಂತರ ನನ್ನನ್ನು ಬೆಳೆಸುವುದು, ಅದು ಒಂದು ಸಾಮಾನ್ಯ ದುರ್ಬಲ ಹೃದಯದ, ಮನಸ್ಸಿನ ವ್ಯಕ್ತಿಯಿಂದ ಮಾಡಲಾಗುವುದಿಲ್ಲ.
ಡಾ. ಅಭಿಷೇಕ್ ನನ್ನ ತಂದೆಯ ಸಮೀಪದ ಸ್ನೇಹಿತರಲ್ಲಿ ಒಬ್ಬರು. ಅವರು ನನ್ನ ತಂದೆಯ ಮರಣದ ನಂತರ ನನ್ನನ್ನು ನೋಡಲು ಬಂದ್ದಿದ್ದರು. ನಾನು ಅವರ ಬಳಿ ತಂದೆಯ ಆತ್ಮಹತ್ಯೆ ಯ ಬಗ್ಗೆ ಸಂಶಯವಿರುವುದಾಗಿ ಹೇಳಿದಾಗ, ತಮ್ಮ ಕ್ಲಿನಿಕ್ ಗೆ ಬರಲು ಹೇಳಿದ್ದರು. ಆದರೆ ನೆನ್ನೆ ಅವರನ್ನು ಭೇಟಿಯಾಗಲು ಹೋದಾಗ ಅವರು ಹೇಳಿದ್ದು ಮಾತ್ರ ನಂಬಲರ್ಹವಾದದ್ದು ಅಲ್ಲ. ಆದರೆ ಎಲ್ಲಿ ಏನು ತಪ್ಪಾಗಿದೆ? ನಾನು ಇದರ ಬಗ್ಗೆ ತುಂಬಾ ಆಳವಾಗಿ ಯೋಚಿಸಬಹುದು. ಆದರೆ ಇದು ಯಾವ ಪಲಿತಾಂಶವನ್ನೂ ನೀಡದೆಂದು ನನಗೂ ತಿಳಿದಿದೆ. ನನ್ನ cameraವನ್ನು ಟೇಬಲಿನ ಮೇಲೆ ಇಟ್ಟು, ಟೆರೇಸ್ ಮೇಲೆ ಕುಳಿತುಕೊಂಡೆ. ಟೈಮರನ್ನು ನಾನು ಆಗಲೇ ಸೆಟ್ ಮಾಡಿ ಇಟ್ಟು ಬಂದಿದ್ದೆ. ಸರಿಯಾಗಿ ಸಮಯವನ್ನು ಹಿಡಿದಿಡುವ ಫೋಟೋವನ್ನು ಕೆಮೆರಾ ಕ್ಲಿಕ್ಕಿಸಿತ್ತು. ಆ ಚಿತ್ರ ನನ್ನ ತಂದೆಯ ಸಾವಿನ ರಹಸ್ಯವನ್ನು ಬಯಲುಮಾಡುವ ಆಸ್ತ್ರವಾಗಬಹುದೇ? ಎಲ್ಲದಕ್ಕೂ ಆ ಸಮಯವೇ ಉತ್ತರ ನೀಡಬೇಕು.
ನಾನು ನೇರವಾಗಿ ನನ್ನ ರೂಮಿಗೆ ಹೋಗಿ ಪ್ರೊಜೆಕ್ಟರ್ ಗೆ ಕೆಮೆರಾವನ್ನು ಸಿಕ್ಕಿಸಿದೆ. ನನ್ನ ಮಂಚದ ಮೇಲೆ ಕತ್ತಲಿನಲ್ಲಿ ಹೋಗಿ ಕುಳಿತುಕೊಂಡೆ. ನನ್ನ ಕಣ್ಣುಗಳು ಗೋಡೆಯಮೇಲೆ ಬೀಳುತ್ತ್ಟಿದ್ದ ನನ್ನ ಫೋಟೋ ಕಡೆಗೆ ಇತ್ತು. ಅದು ಕೇವಲ ನಾನು ಟೆರೇಸ್ ನ ಮೇಲೆ ಕುಳಿತುಕೊಂಡ ಚಿತ್ರ ಅಷ್ಟೇ. ಬಹಳ ಸಮಯದವರೆಗೂ ನಾನು ಅದನ್ನೇ, ಅರ್ಥಾಃತ್ ನನ್ನನ್ನೇ ನೋಡುತ್ತಾ ಕುಳಿತುಕೊಂಡೆ. ನನ್ನ ಮನಸ್ಸು ಇನ್ನೂ ಅನುಮಾನದಿಂದ ತುಂಬಿತ್ತು.
"ಇದು ಒಂದು ಮೂರ್ಖ ಕಲ್ಪನೆ", ನಾನು ಮತ್ತೊಮ್ಮೆ ಯೋಚಿಸಿದೆ.
ಚಿತ್ರವನ್ನು ನೋಡುವುದನ್ನು ಹೊರತುಪಡಿಸಿ ಏನು ಮಾಡಬೇಕೆಂದು ನನಗೆ ತಿಳಿದಿರಲಿಲ್ಲ. ಅದು ಕೇವಲ ನನ್ನ ಫೋಟೋ. ನನ್ನ ತಂದೆ, ಅಥವಾ ಬೇರೆ ಯಾರನ್ನೂ ನಾನು ನೋಡಲಿಲ್ಲ. ಅವರ ಕೊಲೆಯಾದ ನನ್ನ ಸಿದ್ಧಾಂತದ ಬಗ್ಗೆ ನಾನು ಯೋಚಿಸಲಾರಂಭಿಸಿದೆ. ನಾನು ಅವರ ಸಾವಿನ ಬಗ್ಗೆಯೇ ಯೋಚಿಸುತ್ತಾ, ಸುಮ್ಮನೆ ಆ ಫೋಟೋವನ್ನೇ ಧಿಟ್ಟಿಸಿ ನೋಡುತ್ತಿದ್ದೆ. ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದವು, ನನ್ನ ದೇಹ ನಿಧಾನವಾಗಿ ಕಂಪಿಸಿತು, ತಲೆ ತಿರುಗುವಂತಾಯಿತು. ನನ್ನ ತಂದೆಯ ಬಗ್ಗೆ, ಅವರ ಜೊತೆ ಕಳೆದ ಸಮಯದ ಬಗ್ಗೆ, ಅವರು ನನಗೆ ನೀಡಿದ ಜೀವನದ ಬಗ್ಗೆ, ಅವರ ಸಾವಿನ ಸುದ್ದಿ ಕೇಳಿದ ಸಮಯ, ಮೊದಲ ಬಾರಿ ಅವರ ಜೀವವಿಲ್ಲದ ದೇಹವನ್ನು ನೋಡಿದ ಕ್ಷಣ, ನೋವಿನಿಂದ ನಿಶ್ಚೇಷ್ಟನಾಗಿದ್ದ ಬಗ್ಗೆ ಯೋಚಿಸುತ್ತಿದ್ದೆ.
ಕಣ್ಣುಗಳಿಂದ ನೀರು ಧಾರಾಕಾರವಾಗಿ ಕೆನ್ನೆಯ ಮೇಲೆ ಜಾರತೊಡಗಿತು. ನಾನೂ ಕೂಡ ಈಗಲೇ ಸಾಯುತ್ತಿದ್ದೇನೆ ಎನ್ನುವಂತಹ ಭಾವನೆ ಬರತೊಡಗಿತು. ಇದ್ದಕ್ಕಿಂದ್ದಂತೆಯೇ ಗಾಳಿಯಲ್ಲಿ ನನ್ನ ದೇಹ ತೇಲುತ್ತಿರುವಂತೆ ಬಾಸವಾಯಿತು, ನನ್ನ ಕಾಲುಗಳು ನೆಲದ ಮೇಲೆಯೇ ಇರುವುದು ನನಗೆ ಕಾಣುತ್ತಿತ್ತು. ನನ್ನ ತಲೆಯಲ್ಲಿ ಆ ಕಿರುಚುವಿಕೆ ಕೇಳಿಸತೊಡಗಿತು. ಅದು ನನ್ನದೇ ದ್ವನಿ. ಹೌದು, ನಾನು ನನ್ನ ಸ್ವರವನ್ನು ದೂರದಲ್ಲಿ ಎಲ್ಲೋ ಕೇಳುತ್ತಿದ್ದೇನೆ. ನನ್ನ ಕಣ್ಣಿಗೆ ಕಾಣುತ್ತಿರುವುದು; ನನ್ನ ತಂದೆಯ ದೇಹ, ಆತನ ನಿಶ್ಚಲವಾದ ದೇಹ, ಮತ್ತು ಕೊಲೆಗಾರ. ಸ್ವಲ್ಪ ಸಮಯ ಕಣ್ಣಿಗೆ ಕತ್ತಲು ಕಟ್ಟಿದಂತಾಯಿತು.