ನನಗೆ ಸಾಯಬೇಕೆಂದು ಎನ್ನಿಸುತ್ತಿದೆ. ಉಸಿರುಗಟ್ಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನನಗೆ ಉಸಿರಾಡಲು ಆಗುತ್ತಿಲ್ಲ. ದೂರದಲ್ಲಿನ ದೀಪಗಳ ಮಿನುಗುವಿಕೆ ನನಗೆ ಹುಚ್ಚು ಹಿಡಿಯುವಂತೆ ಮಾಡುತ್ತಿವೆ. ನಾನು ಇದನ್ನೆಲ್ಲಾ ನಿಲ್ಲಿಸಲು ಸಾಧ್ಯವಾಗಿದ್ದರೆ ಎಂದು ಒಮ್ಮೆ ಮನಸ್ಸಿನಲ್ಲಿ ಬಂದರೂ ನಾನು ಏನೂ ಮಾಡಲಾರೆ. ಇಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿದಿದ್ದರೆ ನಿಲ್ಲಿಸಬಹುದಿತ್ತೇನೋ.
ನನ್ನ ಮುಂದೆ ಇದ್ದ ಬಾಗಿಲು ಕಿರ್ರೆಂದು ಶಬ್ದ ಮಾಡುತ್ತಾ ತೆರೆದುಕೊಂಡಿತ್ತು. Wait, ಅಲ್ಲಿ ಒಂದು ಬಾಗಿಲು ಇದೆ ಎಂದು ನನಗೆ ಗೊತ್ತಾಗಿದ್ದು ಆಗಲೇ. ಹಾಗಾದ್ರೆ ಎಲ್ಲಿದ್ದೇನೆ ನಾನು? Where the hell am I? ಏನಾಗುತ್ತಿದೆ ಎಂದು ತಿಳಿಯಲು ನಾನು ಎದ್ದು ನಿಲ್ಲಲು ಪ್ರಯತ್ನಿಸಿದೆ. ಆಗಲೇ ಅರಿವಾದದ್ದು ನಾನು ತೇಲುತ್ತಿದ್ದೇನೆ ಎಂದು, ಗಾಳಿಯಲ್ಲಲ್ಲ, ನೀರಿನಲ್ಲಿ. ನಾನು ಈಜಲಾರಂಭಿಸಿದೆ. ಸೂರ್ಯನ ಶಾಖ ಶಕ್ತಿಯ ಎದುರು ಹೆಚ್ಚು ಸಮಯ ಹೊಡೆದಾಡಲು ನನ್ನಿಂದ ಆಗದು ಎಂದೆನಿಸಿತು. ನನ್ನೆದುರು ಇದ್ದ ಆ ಬಾಗಿಲು ಇನ್ನೂ ತೆರೆದೇ ಇತ್ತು. ಮೇ ಬಿ ನನಗೆ ಬೇಕಿದ್ದ ಉತ್ತರಗಳು ಅದರ ಹಿಂದೆ ಇರಬಹುದೇ?
ಶುಭ್ರಾಕಾಶದ ಕೆಳಗೆ ನಾನು ಶಕ್ತಿ ಮೀರಿ ಈಜುತ್ತಿದ್ದೆ, ಪ್ರವಾಹಕ್ಕೆದುರಾಗಿ ಏನೂ ಅಲ್ಲ, ಅದು ನಿಂತ ನೀರಿನ ಕೆರೆ. ತಂಪಾದ ಗಾಳಿ ಬೀಸುತ್ತಿತ್ತು. ಆದರೆ ಬಿಸಿಲಿನ ಜಳ ಇದ್ದೇ ಇತ್ತು. ಮುಸ್ಸಂಜೆಯು ತನ್ನ ಸೌಂದರ್ಯದ ಪರಾಕಾಷ್ಟೆಯನ್ನು ತೋರಲು ಸಿದ್ದವಾಗುತ್ತಿತ್ತು. ನಾನು ಕ್ಷಣದಿಂದ ಕ್ಷಣಕ್ಕೆ ಬಲಹೀನಗೊಳ್ಳುತ್ತಾ ಸಾಗಿದ್ದೆ.
ಅನಿರ್ಧಿಷ್ಟ ಸಮಯದ ಈಜುವಿಕೆಯ ಬಳಿಕ ಆ ದ್ವಾರವನ್ನು ತಲುಪಿದ್ದೆ. ನನ್ನ ಬಟ್ಟೆಯೆಲ್ಲಾ ಒದ್ದೆಯಾಗಿ ಹೋಗಿತ್ತು. ಬೆವರಿನ ವಾಸನೆ ಮೂಗಿಗೆ ಬಡಿಯುತ್ತಿತ್ತು. How’s the hell this possible? ಬಾಗಿಲು ಅಗಲವಾಗಿ ತೆರೆದುಕೊಂಡಿತ್ತು, ನನ್ನನ್ನು ಯಾರಾದರೂ ಆಹ್ವಾನಿಸುತ್ತಿದ್ದಾರೆಯೇ? ನಾನು ಅದರ ಮೂಲಕ ಒಳನಡೆದರೆ ನನಗೆ ಕಂಡಿದ್ದೇನು? ನನ್ನದೇ ಮನೆಯ ಟೆರೇಸ್. ಇದು ತುಂಬಾ ವಿಚಿತ್ರ. ಯಾರೋ ಸ್ವಲ್ಪ ದೂರದಲ್ಲಿ ನಿಂತಿದ್ದರು. ಆಕೃತಿ ಮಾತ್ರ ಕಾಣುತ್ತಿತ್ತು. ಯಾರೆಂದು ತಿಳಿಯಲಿಲ್ಲ. So I went ahead. ನಾನು ಆ ಕಡೆಗೆ ನಿಧಾನವಾಗಿ ಹೆಜ್ಜೆ ಹಾಕಿದೆ. It was my father..!
ಹಾ.. ನನಗೆ ಇದನ್ನು ನಂಬೋದಕ್ಕೇ ಆಗ್ತಾ ಇಲ್ಲ. ಅವರು.. ಅವರು ಇಲ್ಲಿದ್ದಾರೆ. ಜೀವಂತವಾಗಿದ್ದಾರೆ. ನನಗೆ ಭಾವನೆಗಳನ್ನು ಹತ್ತಿಕ್ಕಿಕೊಳ್ಳುವ ಶಕ್ತಿ ಇಲ್ಲ. ಆದ್ದರಿಂದ ಅವರಿದ್ದ ಕಡೆಗೆ ವೇಗವಾಗಿ ಓಡಲು ಮೊದಲು ಮಾಡಿದೆ. ಆದರೆ ಇದ್ದಕ್ಕಿದ್ದಂತೆ ಯಾವುದೋ ಒಂದು ಭೀಕರ ಶಕ್ತಿ, ಕಾಣದ ಕೈಯೊಂದು ನನ್ನನ್ನು ಎತ್ತಿ ಹಿಂದಕ್ಕೆ ಎಸೆಯಿತು. ಹೇಗೋ ಮತ್ತೆ ಎದ್ದು ಓಡಲಾರಂಭಿಸಿದೆ. ಮತ್ತೆ ಮೊದಲಿನಂತೆ ಅದೃಶ್ಯ ಶಕ್ತಿ ನನ್ನನ್ನು ಇನ್ನೂ ಹಿಂದಕ್ಕೆ ಹಾಕಿತು. ಈ ಭಾರೀ ನನ್ನ ಮೂಗಿನಿಂದ ರಕ್ತ ಚಿಮ್ಮಿ ಬಂತು. ಅದರ ಕಡೆಗೆಲ್ಲಾ ಗಮನ ಹರಿಸುವಷ್ಟು ತಾಳ್ಮೆ ಇರಲಿಲ್ಲ. ನನ್ನ ತಂದೆ ಬಹಳ ದೂರದಲ್ಲಿದ್ಡ್ಡರು. ಅವರ ನೋಟ ಟೆರೇಸ್ ನ ನೆಲದ ಕಡೆಗಿತ್ತು. ಅವರು ಯಾವುದೋ ವಿಷಯದ ಸಲುವಾಗಿ ಚಿಂತಿತರಾಗಿದ್ದಂತೆ ಕಂಡುಬಂದರು. ನಾನು ಮತ್ತೊಮ್ಮೆ ಅವರಿದ್ದ ಸ್ಥಳವನ್ನು ತಲುಪಲು ಹವಣಿಸಿದೆ. ಒಂದು ಭಾರೀ, ಒಂದೇ ಒಂದು ಭಾರೀ ಅವರನ್ನು ಸ್ಪರ್ಶಿಸಲು, ಅವರ ಅಪ್ಪುಗೆಯನ್ನು ಪಡೆಯಲು ನನ್ನ ಮನಸ್ಸು ಹಪಹಪಿಸುತ್ತಿತ್ತು. ಉಫ್, ಅಂತೂ ನನ್ನ ತಂದೆಯ ಬಳಿ ತಲುಪಿದ್ದೆ. ಒಮ್ಮೆ ಧೀರ್ಘವಾಗಿ ಉಸಿರೆಳೆದುಕೊಂಡು ಅವರ ಹೆಗಲ ಮೇಲೆ ಕೈಯಿಡಲು ಹೋದೆ. ಅಷ್ಟೇ, ನಾನು ಮತ್ತೊಮ್ಮೆ ಆ ನಿಗೂಢ ಶಕ್ತಿಯ ಹೊಡೆತಕ್ಕೆ ಸಿಲುಕಿದ್ದೆ. ಆದರೆ ಈ ಭಾರಿಯ ಹೊಡೆತದ ತೀವ್ರತೆಗೆ ಟೆರೆಸ್‌ನ ನೆಲ ಬಿರುಕು ಬಿಟ್ಟಿತ್ತು..! ನನ್ನ ಕಣ್ಣುಗಳಲ್ಲಿ ನಕ್ಷತ್ರಗಳು ಪ್ರತ್ಯಕ್ಷವಾಗತೊಡಗಿತು. ನನ್ನೆದುರಿನದೆಲ್ಲವೂ ಸ್ಪಷ್ಟತೆಯನ್ನು ಒಮ್ಮೆ ಕಳೆದುಕೊಳ್ಳುವುದು, ಮತ್ತೆ ಪಡೆದುಕೊಳ್ಳುವುದು ಆಗುತ್ತಿತ್ತು. ಈ ಉನ್ಮಾದದಲ್ಲಿಯೂ ಕೂಡ ನನ್ನ ತಂದೆ ಯಾರೊಂದಿಗೋ ಮಾತನಾಡುವುದನ್ನು ನೋಡಿದೆ. Wait, ಯಾರು ಆ ವ್ಯಕ್ತಿ? ಅವರಿಬ್ಬರೂ ವಾದ ಮಾಡುವಲ್ಲಿ ನಿರತರಾಗಿದ್ದರು. ನನ್ನ ತಂದೆಯ ಕೋಪ ಅವರ ಮುಖದಲ್ಲಿ ಕಾಣುತ್ತಿತ್ತು. ನನ್ನ ಇರುವಿಕೆ ಅವರ ಗಮನಕ್ಕೆ ಬರಲಿಲ್ಲವೇನೋ ಎಂದುಕೊಂಡೆ. ಆ ಅನಾಮಿಕ ವ್ಯಕ್ತಿ ನನ್ನ ತಂದೆಯ ತೋಳನ್ನು ಹಿಡಿದು ಟೆರೇಸಿನ ತೆರೆದ ಬಾಗದ ತುತ್ತತುದಿಗೆ ಕರೆದು ತಂದಾಗ ನನ್ನ ಹೃದಯ ಬಡಿತ ದ್ವಿಗುಣಗೊಂಡಿತ್ತು. ನನ್ನ ತಂದೆಯನ್ನು ಉಳಿಸಲು ಪ್ರಯತ್ನಪಡಬೇಕೆಂದು ಹೆಜ್ಜೆ ಎತ್ತಿದ್ದೆ ಅಷ್ಟೇ ಮಹಡಿಯಲ್ಲುಂಟಾಗಿದ್ದ ಬಿರುಕು ಇನ್ನೂ ಅಗಲವಾಗುತ್ತಾ ಸಾಗಿತು. ಯಾವುದೇ ಕ್ಷಣದಲ್ಲಿ ಕೂಡ ಕೂಡ ನಾನು ಕೆಳಗೆ ಬೀಳಬಹುದು. ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಆದರೆ ನನ್ನ ತಂದೆಯ ಕೊಲೆಯನ್ನು ಮಾಡಿದ ಆ ವ್ಯಕ್ತಿಯ ಮುಖವನ್ನು ಮಾತ್ರ ನೋಡುವಂತಾದರೆ ಸಾಕು. ಕಣ್ಣು ಮಿಟುಕಿಸುವುದರೊಳಗೆ ಆ ಅಪರಿಚಿತ ವ್ಯಕ್ತಿ ನನ್ನ ತಂದೆಯನ್ನು ಬಲವಾಗಿ ತಳ್ಳಿತ್ತು. ಅವರು ಕಿರುಚುತ್ತಾ ಗಾಳಿಯಲ್ಲಿ ಕೆಳಗೆ ಕೆಳಗೆ ಹೋಗುತ್ತಿದ್ದಾರೆ. ಓಹ್, ನನ್ನ ದೃಷ್ಟಿಯಿಂದ ಮರೆಯಾಗಿ ಹೋದರು. ನನ್ನ ತಂದೆಯನ್ನು ಹತ್ಯೆಗೈದ ಆ ಅನಾಮಿಕ ವ್ಯಕ್ತಿಯತ್ತ ನೋಡುತ್ತಿದ್ದೆ.ಕೊನೆಗೂ ಬಿರುಕು ಬಿಟ್ಟಿದ್ದ ಟೆರೇಸಿನ ನೆಲ ನನ್ನ ತೂಕವನ್ನು ತಡೆದುಕೊಳ್ಳಲಿಲ್ಲ. ಈ ಜಗತ್ತು ಕೊನೆಗೊಳ್ಳುವ ಸಮಯ, ಡೂಮ್ಸ್ ಡೇಯ ಭಾಸವಾಯಿತು. ಗುರುತ್ವಾಕರ್ಷಣೆ ತನ್ನ ಕೆಲಸವನ್ನು ಮಾಡಿತು. ನಾನು ಬೀಳುತ್ತಿದ್ದೆ. ಯಾವುದೇ ಹಿಡಿದಿಡುವ ಶಕ್ತಿಯಿಲ್ಲದೆ ಗಾಳಿಯಲ್ಲಿ ಬಲಹೀನ ವಸ್ತುವಿನಂತೆ ಜಾರಿಹೋಗುತ್ತಿದ್ದೆ, ಆ ಅಪರಿಚಿತ ವ್ಯಕ್ತಿಯಿಂದ ದೂರ ದೂರ ಸರಿದು. ಆದರೆ ಬೀಳುವ ಕೊನೆಯ ಕ್ಷಣದಲ್ಲಿ ಆ ವ್ಯಕ್ತಿಯ ಮುಖವನ್ನು ನೋಡಿದ್ದೆ. ಆಹ್.. ಆ ಕ್ರೂರ ಕೊಲೆಗಡುಕ ಕಣ್ಣುಗಳು. ಅವುಗಳನ್ನು ಮತ್ತೊಮ್ಮೆ ನೋಡಲು ನನ್ನಿಂದ ಸಾಧ್ಯವಿಲ್ಲ. ಈಗ ನನ್ನಲ್ಲಿ ಕಿಂಚಿತ್ತೂ ಸಂಶಯ ಉಳಿದಿಲ್ಲ. ಪಕ್ಕದ ಕಟ್ಟಡದ ಗಾಜಿನ ಗೋಡೆಯ ಮೇಲೆ ಆ ವ್ಯಕ್ತಿಯ ಬಿಂಬ, ಉಫ್... ಇಟ್ಸ್ ಮೈ ರಿಫ್ಲೆಕ್ಶನ್ ಕಂಡಿತು. ಅನಂತದೆಡೆಗೆ ಬೀಳುತ್ತ್ತಿರುವ ನನ್ನನ್ನು ಬಿಟ್ಟು ಆ ಮತ್ತೊಂದು 'ನಾನು' ಬೇರೆಡೆಗೆ ತಿರುಗಿತು. ನಾನು ತಳವಿಲ್ಲದ ಕತ್ತಲೆಯ ಕೂಪಕ್ಕೆ ಬೀಳುತ್ತಾ ಸಾಗಿದ್ದೆ. ---------------------------- NEXT DAY... MORNING 9AM --------------- “ಸಾರ್..?” “Hi ಸಂಚಿತಾ. ಯಾಕೆ ನನ್ನನ್ನು ಬರಹೇಳಿದ್ದು?”, ಎಂದು ಇನ್ಸ್‌ಪೆಕ್ಟರ್ ಮೋಹನ್ ನಗುತ್ತಾ ಹೇಳಿದರು. “ನಾನು ನಿಮಗೆ ಏನೋ ಹೇಳಲಿಕ್ಕಿದೆ. I have something..” “ಓಹ್. ನಾನು ನಿಮಗೆ ಎಷ್ಟು ಸಾರಿ ಹೇಳಿದ್ದೀನಿ? ನಿಮ್ಮ ತಂದೆ..your father committed suicide. Believe me.”, ನಾನು ಮತ್ತೆ ಅದೇ ಹಳೆಯ ರಾಗ ತೆಗೆದಾಗ ತಾಳ್ಮೆಗೆಟ್ಟು ಹೇಳಿದರು. “I have a confession to make. ಅವ್ರದ್ದು ಸೂಸೈಡ್ ಅಲ್ಲ. ಮರ್ಡರ್. ನಾನೇ ಕೊಂದಿದ್ದು. ನನ್ನ ಮನೆಯ ಮಹಡಿಯಿಂದ ತಳ್ಳಿ ಕೊಂದಿದ್ದು ನಾನೇ. ಯಾಕೆ.....?”, ಎಂದು ಇನ್‌ಸ್ಪೆಕ್ಟರ್ ಎದುರು ಕಿರುಚಿದೆ. ನನ್ನ ಬಳಿ ಉತ್ತರವಿಲ್ಲ.
----------------- THE END -------------
ಇತರ ಕಥೆಗಳಿಗಾಗಿ ಭೇಟಿ ನೀಡಿ: Stories ಅಥವಾ ಈ-ಬುಕ್ ಡೌನ್ಲೋಡ್ ಮಾಡಿಕೊಳ್ಳಲು Download ಗೆ ಹೋಗಿ.