ಪ್ರಕೃತಿ |
ವಾಸ್ತವ |
ನಿನ್ನ ನಗುವಿನ ಸುಮಧುರ
ಅಲೆಗೆ ನಾಚಿತು ಆ ಕೋಗಿಲೆ ಆ ನಗುವಿನ ಸೆಲೆಯೊಳಗೆ ಸಾಗರದ ಕಲರವದ ತೆರೆ ನಿನ್ನ ಮುಖದ ಕಾಂತಿಗೆ ಮಂಕಾದ ಆ ಪೂರ್ಣ ಚಂದಿರ ಈ ಕಾಂತಿಗೆ ಸರಿಸಾಟಿಯಿಲ್ಲ ಆ ಸೂರ್ಯನ ಮೈಕಾಂತಿ ನಿನ್ನ ಮುಂಗುರುಳನು ನೇವರಿಸಿದ ಆ ತಂಗಾಳಿಗೆ ಅವಸರದ ಕಳೆ ಈ ಕಳೆಯೊಳಗಿನ ಸಿರಿತನಕೆ ತಲೆಬಾಗಿತು ಈ ಇಳೆ ಈ ನಿನ್ನ ಜೀನ ಅಧರಕೆ ಮುಂಜಾನೆ ಮಂಜಿನ ಅಲಂಕಾರ ಆ ಹೊಳೆಯುವ ಹನಿಗಳ ಚಿತ್ತಾರದ ಸೊಬಗಿಗೆ ಪ್ರಕೃತಿಯೇ ಮಾಡಿದೆ ನಮಸ್ಕಾರ ನೀನೇ ಕೆಂಪು ಗುಲಾಬಿಯಂತಿರುವಾಗ ನಿನಗೇಕೆ ಗುಲಾಬಿಯ ತಂದುಕೊಡುವುದು ನಿನ್ನ ನಸುನಾಚಿ ಕೆಂಪಾದ ಕೆನ್ನೆಯ ನೋಡಿ ಪಡುವಣದಲಿ ಜಾರುತಿದ್ದ ರವಿ ಕೂಡ ಕವಿಯಾದ |
ವಾಸ್ತವಿಕತೆಯ ಕರಾಳ ಕೈಗಳು
ಹೂವಿನಂತ ಮುಗ್ದ ಮಧುರವಾದ ಮನಸಿನ ಕನಸುಗಳನ್ನು ಹಿಚುಕುವ ಗಳಿಗೆಯಲಿ ಮನಸುಗಳು ಛಿದ್ರ ಛಿದ್ರ ಕನಸುಗಳು ಚೂರು ಚೂರು ಚಿಂತೆಒಂದಾದ ಮೇಲೊಂದು
ಏನಾದರೊಂದು ಬಗೆಯಲಿ ಎಲ್ಲರನು ಕಾಡುತ್ತಾ ನೆಮ್ಮದಿಯ ಹಗೆಯಾಗಿ ತಲೆ ತಿನ್ನುವ ಹೇನು... ಶಾಂತಿ
ಎಲ್ಲೆಲ್ಲಿ ಅಲೆದರೂ
ಎಂದಿಗೂ ಯಾರಿಗೂ ಸಿಗದೆ ಎಲ್ಲರೂ ಅರಸುತಿಹ ನೀನು ಅಡಗಿರುವೆಯೆಲ್ಲಿ? |