( Urgent ಅಲ್ಲಿ ಗೀಚಿದ್ರೆ ಹೀಗೆ ಆಗೋದು... ಗೀಚದೆ ಇದ್ರೆ? ...ನಾನು ಹೇಳೋದಿಲ್ಲ.. ಅವಳೇ ಹೇಳ್ತಾಳೆ.. ಓದಿ... ) ಹೇಗೆ ಪ್ರಾರಂಭಿಸಬೇಕು ಅಂತಾನೆ ತಿಳೀತಿಲ್ಲ. ಆದ್ರೂ ಇವತ್ತು ನಿನಗೆ ಹೇಳ್ಬೇಕಾದದ್ದು ತುಂಬಾ ಇದೆ. ನಮ್ಮ ಸ್ನೇಹಕ್ಕೆ ಹತ್ತು ವರ್ಷಕ್ಕಿಂತ ಜಾಸ್ತಿ ವಯಸ್ಸಾದರೂ ನಮಗೆ ನಾವೇ friends ಅಂತ ಹೇಳಿಕೊಂಡು ದಶಕವಾಯಿತು ಅಷ್ಟೇ. ನಾವಿಬ್ಬರೂ ಯಾವಾಗ್ಲೂ ಜಗಳ ಮಾಡ್ತಾನೇ ಇದ್ರು ಅದು ಯಾವತ್ತೂ serious ಅಂತ ಹೇಳೋ ಮಟ್ಟಕ್ಕೆ ಹೋಗಿಲ್ಲ. ಅದಕ್ಕೆ ಜಗಳ ಅಂತ ಹೆಸರು ಇಡೋದು ತಪ್ಪಾಗುತ್ತೆ ಅನ್ಸುತ್ತೆ. ಕಾಲೆಳೆಯೋದು ಅಂತ ಹೇಳ್ಬಹುದೇನೋ. ನಾನು ನಿನ್ನೊಂದಿಗೆ ಕಳೆದ ಕ್ಷಣಗಳೆಷ್ಟೋ. ಹೇಳುವಷ್ಟು ತಾಳ್ಮೆ ನನ್ನಲ್ಲಿಲ್ಲ. ನೆನಪು ಮಾಡಿಕೊಳ್ಳಬಹುದಷ್ಟೆ. ನಾನು ಶಾಲೆಯಿಂದ ಹೊರಬರುವುದನ್ನೇ ಕಾಯುತ್ತಾ ದೂರದಲ್ಲಿ ಸೈಕಲ್ ನಿಲ್ಲಿಸಿ ಕಾಯುತ್ತಿದ್ದೆ. ಜಡಿಮಳೆಯಲ್ಲಿ ನಿನ್ನೊಂದಿಗೆ ಇದ್ದಿದ್ದು ನಾನೇ ಅಲ್ಲವೇ? ಇಂತಹ ನೂರಾರು ನೆನಪುಗಳು ನೆನಪುಗಳ ಪುಟಗಳಲ್ಲಿ ಅಚ್ಛಾಗಿವೆ. ನೀನು ನನಗೆ ಪ್ರಪೋಸ್ ಮಾಡ್ತೀಯಾ ಅಂತ ನಾನೆಂದೂ ಅನ್ಕೊಂಡಿರ್ಲಿಲ್ಲ. ನಿನಗೆ ಅಷ್ಟೊಂದು ಧೈರ್ಯ ಇಲ್ಲವೆಂದು ನಾನು ತಿಳಿದಿದ್ದೆ. ಆದ್ರೆ ನೀನು ಅದನ್ನು ಹುಸಿಗೊಳಿಸಿದೆ. ಆ ದಿನ ರಾತ್ರಿ ಪ್ರಪೋಸ್ ಮಾಡಿದೆ. ನಾನು ನಿನ್ನನ್ನ ಯಾವಾಗ್ಲೂ ಸ್ನೇಹಿತ ಅಂತ ತಿಳಿದಿದ್ದೆ. ಆದ್ರೆ ನೀನು ಕೊನೆಗೆ ಹೋಗಿ ನಿಲ್ತಿದ್ದಿದ್ದು ಮಾತ್ರ ಅದೇ matterಗೆ. ಅದು ನನಗೆ ಇಷ್ಟ ಆಗ್ತಾ ಇರ್ಲಿಲ್ಲ. ಸ್ನೇಹಿತರಾಗಿಯೇ ನಾವು ಇರೋಕೆ ಆಗೊಲ್ವ? ಅಂತ ಹೇಳಿದ್ರೆ ಪ್ರೀತಿ ಇಲ್ದೆ ಸ್ನೇಹ ಇಲ್ಲ ಅಂತ ಉದ್ದುದ್ದ ಭಾಷಣ ಮಾಡಿ ನನ್ನ ಬಾಯಿ ಮುಚ್ಚಿಸ್ತಿದ್ದೆ. ಉಫ್.. ನಾನು ಇನ್ನೇನು ಹೇಳೋಕಾಗದೆ ನಿನ್ನನ್ನ avoid ಮಾಡೋ ಸಲುವಾಗಿ ವ್ಹಾಟ್ಸ್ಆಪ್ , ಫೇಸ್ಬುಕ್ ಗಳಲ್ಲಿ block ಮಾಡಿದೆ. But no use. ನನ್ನ ಮನಸ್ಸು ಕಲ್ಲು ಅಂತ ಆ ದಿನ ನೀನು ಹೇಳಿದ್ದೆ. ಆದ್ರೆ ಈ ದಿನ ನಾನು ನಿನಗೆ ಹೇಳೋ ಪರಿಸ್ಥಿತಿ ಬಂದಿದೆ. ನಾನು ನಿನ್ನ ಸ್ನೇಹ ಬಯಸಿದ್ದೆ . ನೀನು ನನ್ನ ಪ್ರೀತಿ ಮಾಡಿದೆ. ನನಗೆ ಪ್ರೇಮಿ ಆಗೋ ಮನಸ್ಸಿರ್ಲಿಲ್ಲ. ನಿನಗೆ ಸ್ನೇಹ ಉಳಿಸಿಕೊಳ್ಳೋ ಆಸೆ ಇರ್ಲಿಲ್ಲ. ನೀನು ಇವತ್ತು ನನ್ನ ಕಣ್ಣಲ್ಲಿ ನೀರು ಹಾಕ್ಸಿದೆ. ಇವತ್ತು ಒಂದು ಮಾತ್ರ confirm ಆಯ್ತು. ಲೈಫಲ್ಲಿ ಕಣ್ಣೀರು ಕಾಮನ್ನು. ನನ್ನ ಹೃದಯ ಹಾಳಾಗಿದೆ. ಮನಸ್ಸು ಯಾಕೋ ನೀನೇ ಬೇಕೆಂದು ಗೋಳಾಡಿದೆ. ನನಗೋಸ್ಕರ ಯಾವತ್ತೂ ಅಳ್ಬೇಡ. ಎಲ್ಲರೆದ್ರು ನಿನ್ನ ನಾ ಬಚ್ಚಿಟ್ಟುಕೊಂಡ್ರು ಕೂಡ ಒಳಗೊಳಗೇ ಅಲ್ತಿಯ ಅಂತ ಗೊತ್ತು. ಸಾರಿ ಕಣೋ.... ನಾನಿನ್ನು ಹೋಗಿ ಬರ್ತೀನಿ. ಇಂತಿ ನಿನ್ನ ಸಿಂಧು