ಮನದಾಳದ ಮಾತು
|
|
ಬದುಕು
|
ಪ್ರವಾಹ
|
ವ್ಯರ್ಥ ಕನಸು
|
ಕೊನೆಗಾಣದ ಈ ಪಯಣ
ಕೈಗೂಡದ ಅದೆಷ್ಟೋ ಆಸೆ ಬಯಕೆಗಳ ಮಹಾ ಜಾತ್ರೆ ನನಸು ಕನಸುಗಳ ಲೋಕದಲ್ಲಿ ಏಳುತ್ತಾ ಬೀಳುತ್ತಾ ನಡೆದಿರುವ ಕಲ್ಲುಮುಳ್ಳುಗಳ ಹಾದಿಯ ಯಾತ್ರೆ ನೆನಪು
ನಾ ಕಟ್ಟಿದ ಕನಸಿನ ಗೋಪುರ
ಬಿರುಗಾಳಿಗೆ ಸಿಲುಕಿ ಉರುಳಿದಾಗ ಉಳಿದಿದು ನಾ ನಿನ್ನೊಂದಿಗೆ ಮಳೆಯಲಿ ನಿಂತ ನೆನಪು ಮಾತ್ರ |
ನೀ ಮುಳುಗಿಸಿ ಹೋದ
ನೋವಿನ ತೆರೆಗಳಲಿ ಅಪ್ಪಳಿಸುತ್ತಿರುವ ನಾನು ಪ್ರವಾಹದೊಂದಿಗೆ ಹರಿವ ಕಡ್ಡಿಯಾಗಿದ್ದೇನೆ |
ಈ ಬದುಕು ಬಂಜರು ನೆಲದಲ್ಲಿ
ಹಸಿರೊಡೆಯದ ಆಸೆಗಳು ಸುರಿಯುತ್ತಲೇ ಸೋರಿಹೋಗುತ್ತವೆ ನನಸಾಗದ ಅದೆಷ್ಟೋ ಕನಸುಗಳು ಅರ್ಥವಿಲ್ಲದೆ ವ್ಯರ್ಥವಾಗುತ್ತದೆ ಸುಖ
ಜಗದಿ ಹಲವರಿಗೆ ಸುಖ
ನಲಿವುಗಳಿಂದ ನನಸಾದ ಕನಸುಗಳಿಂದ ಕೆಲವರಿಗೆ ಮಾತ್ರ ಯಾತನೆಗಳಿಂದ |