ನಾನು ಸುಪ್ತ ಸ್ಥಿತಿಯಿಂದ ಹೊರಬಂದು, ಕಣ್ಣುಜ್ಜುತ್ತಿರುವಾಗ, ಎಲಿಮಿ - 'ವೆಲ್ಕಮ್ ಬ್ಯಾಕ್, ಹೆಗಡೆ. ನೀನೀಗ 450 ವರ್ಷಗಳ ಧೀರ್ಘ ನಿದ್ದೆಯಿಂದ ಎದ್ದಿರುವೆ. Be ready for the adventure.' ಎಂದಳು.
2035ರಲ್ಲಿ ನಮ್ಮ ಭೂಮಿಯ ಎಲ್ಲ ಶಕ್ತಿ ಸಂಪತ್ತುಗಳು ಅದೃಶ್ಯವಾಗತೊಡಗಿದಾಗ ಹೊಸ ಭೂಮಿಯನ್ನು ಹುಡುಕುವ ಅನಿವಾರ್ಯತೆ ತಲೆದೋರಿತು. ಆಗ ಎಂಟು ಜನರ ತಂಡ ಹೊಸ ಮನೆಯನ್ನು ಹುಡುಕಲು ಹೊರಟಿತು. ಆ ತಂಡದಲ್ಲಿದ್ದವರಲ್ಲಿ ನಾನೂ ಒಬ್ಬ. ಅಂತರಿಕ್ಷಯಾನ ಹತ್ತಿದ ಕೆಲವೇ ಕ್ಷಣಗಳಲ್ಲಿ ಗಾಢವಾದ ನಿದ್ದೆ ನನ್ನನ್ನು ಆವರಿಸಿತು. ನಾನು ಮತ್ತೆ ಕಣ್ಣು ತೆರೆದಾಗ 2121. Space adventure of Hegde in near future... |