ಭಾಗ 2:
ಅನಿತಾ ತನ್ನ ಎಡಗೈ ತೋರುಬೆರಳಿನಿಂದ ಮುಖದ ಮೇಲೆ ಇಳಿ ಬಿದ್ದಿದ ಮುಂಗುರಳನ್ನು ಹಿಂದೆ ಸರಿಸಿದಳು. ಅವಳು ಯಾವಾಗಲೂ ತಾನು ಸುಂದರವಾಗಿ ಕಾಣಬೇಕೆಂದು ಇಲ್ಲಸಲ್ಲದ ಸರ್ಕಸ್ ಮಾಡುತ್ತಿದ್ದಳು. ಕನ್ನಡಿಯಲ್ಲಿ ತನ್ನನ್ನು ತಾನೇ ನೋಡಿಕೊಂಡು ಪರ್ಫೆಕ್ಟ್ ಎಂದುಕೊಂಡಳು.
"ಸಂಧ್ಯಾಳಂತ ಕೆಲವರಿಗೆ ಹೇಗೆ ಸಿಂಗರಿಸಿಕೊಳ್ಳಬೇಕೆಂದು ತಿಳಿದಿಲ್ಲ. ಅದಕ್ಕೆ ಅವಳ ಗಂಡ ಅವಳತ್ತ ತಿರುಗಿಯೂ ನೋಡುವುದಿಲ್ಲ." - ಒಬ್ಬಳೇ ಗೊಣಗುಟ್ಟಿದಳು.
ಅನಿತಾ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಅವಳು ತನ್ನನ್ನು ತಾನು ಹೇಗೆ ಪೋಷಿಸಿಕೊಳ್ಳಬೇಕೆಂದು ತಿಳಿದಿದ್ದಳು. ಹುಡುಗರು ಮಾತ್ರವಲ್ಲದೇ ಹುಡುಗಿಯರೂ ಕೂಡ ಅವಳ ಸೌಂದರ್ಯ ಪ್ರಜ್ಞೆಯನ್ನು ಹೊಗಳುತ್ತಿದ್ದರು.
ಇಬ್ಬರೂ ಒಂದೇ ಅಪಾರ್ಟ್ಮೆಂಟ್ನಲ್ಲಿದ್ದಿದ್ದರಿಂದ, ಅನಿತಾ ಸಂಧ್ಯಾಳನ್ನು ಯಾವಾಗಲೂ ಕೀಳಾಗಿ ನೋಡುತ್ತಿದ್ದಳು. ಸಂಧ್ಯಾಳ ಬಗೆಗೆ ಜಯಂತ್ ಅಸಹ್ಯಪಟ್ಟುಕೊಳ್ಳುತ್ತಾನೆ ಎಂದು ಬಾಯಿಬಿಟ್ಟು ಹೇಳದಿದ್ದರೂ ಕೂಡ ಮನಸ್ಸಿನಲ್ಲೇ ನಿರ್ಧರಿಸಿದ್ದಳು. “ಸಂಧ್ಯಾ ಒಬ್ಬ ಮೂರ್ಖ ಹೆಣ್ಣು" ಎಂಬುದು ಅವಳ ಅಭಿಪ್ರಾಯವಾಗಿತ್ತು.
ಆದರೆ ಒಂದು ದಿನವೂ ಕೂಡ ಜಯಂತ್ ನನ್ನು ನೋಡುವುದನ್ನು ತಪ್ಪಿಸುತ್ತಿರಲಿಲ್ಲ. ಅವನ ದೇಹದಾರ್ಡ್ಯ - ಬಲಿಷ್ಟವಾದ ಮಾಂಸಖಂಡಗಳು, ಮುಖ ಲಕ್ಷಣಗಳು, ಎತ್ತರ - those her husband is missing made her go crazy..! ಅಷ್ಟೇ ಅಲ್ಲದೇ ಜಯಂತ್ ತನ್ನ ಸ್ನೇಹಿತನೊಬ್ಬನ ಬಳಿ ಸಂಧ್ಯಾಳ ಡ್ರೆಸಿಂಗ್ ಸೆನ್ಸ್ ಹಾಗೂ ಅವಳಿಗೆ ಅವಳ ಮೇಲೆಯೇ ಕಾಳಜಿ ಇರದಿರುವುದರ ಬಗ್ಗೆ ದೂಷಿಸುತ್ತಿರುವುದು ಕಿವಿಗೆ ಬಿದ್ದಿತ್ತು. ಆ ದಿನವೇ ಅನಿತಾ ಒಂದು ನಿರ್ಧಾರಕ್ಕೆ ಬಂದಿದ್ದಳು. ತನ್ನಂತಹ ಹೆಣ್ಣನ್ನೇ ಜಯಂತ್ ಇಷ್ಟ ಪಡುವುದು ಎಂದು ಲೆಕ್ಕ ಹಾಕಿದಳು. ಆತನನ್ನು ತನ್ನೆಡೆಗೆ ಸೆಳೆಯಲು ವಿಶೇಷ ಕಾಳಜಿ ವಹಿಸಿ ತನ್ನ ದೇಹವನ್ನು ಮತ್ತು ಮನಸ್ಸನ್ನು ಸಿದ್ದಪಡಿಸಿಕೊಳ್ಳತೊಡಗಿದಳು. ಆತ ಸಂಧ್ಯಾಳಲ್ಲಿ ಏನನ್ನು ದ್ವೇಷಿಸುತ್ತಾನೋ ಅದನ್ನು ತನ್ನಲ್ಲಿ ಇಷ್ಟಪಡಬೇಕೆಂದು ಹಾತೊರೆದಳು. ಜಯಂತ್ ಯಾರನ್ನಾದರೂ ಇಷ್ಟ ಪಡುತ್ತಾನೆ ಎಂದಾದರೆ ಅದು ತಾನೇ ಆಗಿರಬೇಕೆಂದು ಬಯಸಿದಳು. ಅವಳು ನಿಧಾನವಾಗಿ ತನ್ನನ್ನೇ ಸಂಪೂರ್ಣವಾಗಿ ಬದಲಿಸಲು ಪ್ರಾರಂಭಿಸಿದಳು. Is this a sign of flood in life of Sandhya? Wait..
"ಟೂ ಬ್ಯಾಡ್. ಅವನು ನನ್ನ ಕಡೆ ಗಮನ ಕೊಡೋದೇ ಇಲ್ಲ." ಅನಿತಾ ತಾನು ಅತ್ಯಂತ ಸುಂದರವಾಗಿ ಮೇಕಪ್ ಹಾಗೂ ಸೀರೆಯಲ್ಲಿ ಕಂಗೊಳಿಸುತ್ತಿದ್ದೇನೆ ಎಂದು ಅಂದುಕೊಂಡ ದಿನವೂ ಕೂಡ ಇವಳತ್ತ ಕಣ್ಣು ಹಾಯಿಸಲಿಲ್ಲ.
"ನೀನು ಗ್ರೀಕ್ ದೇವತೆಯಂತೆ ಕಾಣುತ್ತಿದ್ದೀಯ. ಜಯಂತನಂತ ಗಂಡಸರು ಮೂರ್ಖ ಹೆಣ್ಣಿನ ಹಿಂದೆಯೇ ಹೋಗುತ್ತಾರೆ" ಎಂದು ತನ್ನನ್ನು ತಾನೇ ಹೊಗಳಿಕೊಂಡು ಸಮಾಧಾನಮಾಡಿಕೊಂಡಳು. ಪ್ರತಿದಿನವೂ ಸುಂದರವಾಗಿ ಅಲಂಕರಿಸಿಕೊಂಡು ಅವನಿಗಾಗಿ ಕಾದು ನಿಂತಿರುತ್ತಿದ್ದಳು, ಟು ಲೀವ್ ಹಿಸ್ ಸ್ಟುಪಿಡ್ ವೈಫ್ ಬ್ಯಾಕ್ ಅಂಡ್ ಕಮ್ ಟು ಹರ್.
ಒಂದು ದಿನ ಅವಳ ಅದೃಷ್ಟ ಖುಲಾಯಿಸಿಯೇ ಬಿಟ್ಟಿತ್ತು. ಬೆಳಗಿನ ಉಪಹಾರವನ್ನು ಮುಗಿಸಿ ಏನನ್ನೋ ಖರೀದಿಸಲು ಹೊರಟಳು. ಅನಿತಾ ತನ್ನ ಗಂಡನನ್ನು ತನ್ನಿಂದ ಕಿತ್ತುಕೊಳ್ಳಲು ಹವಣಿಸುತ್ತಿದ್ದಾಳೇ ಎಂದು ತಿಳಿದಿರಲಿಲ್ಲ.
ಸಂಧ್ಯಾ ತನ್ನ ಸುತ್ತಮುತ್ತಲೂ ನಡೆಯುತ್ತಿರುವ ವಿದ್ಯಮಾನಗಳತ್ತ ಕೇಂದ್ರಿಕರಿಸುವುದನ್ನು ನಿಲ್ಲಿಸಿದಳು. ಅವಳು ತನ್ನದೇ ಪ್ರಪಂಚದಲ್ಲಿ ಬಂದಿಯಾದಳು - ದ್ವಂದ್ವ ಮತ್ತು ದುಃಖಗಳಿಂದ ಕೂಡಿದ ಲೋಕದಲ್ಲೇ ಸಂತೋಷವನ್ನು ಹುಡುಕತೊಡಗಿದಳು. ಇದರ ಸಂಪೂರ್ಣ ಲಾಭವನ್ನು ಅನಿತಾ ಪಡೆದಳು.
ಸಂಧ್ಯಾ ನಿದ್ದೆಯಿಂದೆದ್ದಾಗ ಗಡಿಯಾರ ಮೂರು ತೋರಿಸುತ್ತಿತ್ತು. ಹೊಟ್ಟೆ ಹಸಿವಿನಿಂದ ಚುರುಕ್ ಎಂದಾಗಗಡಿಬಿಡಿಯಿಂದ ಎದ್ದು, ಕೂದಲನ್ನು ಗಂಟು ಹಾಕಿಕೊಂಡು ಟೇಬಲ್ ಮೇಲಿಟ್ಟಿದ್ದ ತಟ್ಟೆಯನ್ನು ತೆರೆದಾಗ ಏನು ಇರಲಿಲ್ಲ. ಯಾರೋ ತಿಂದಿದ್ದರು. ಒಂದು ಕ್ಷಣ ದಿಗಿಲಾದರೂ ಕೂಡ ಅವಳಿಗೆ ನೆನಪಿತ್ತು - ತಾನು ಅದನ್ನು ಮುಚ್ಚಿಟ್ಟಿದ್ದೆ ಎಂದು. ತಾನೇ ನಿದ್ದಗಣ್ಣಿನಲ್ಲಿ ಎಂದು ತಿಂದಿರಬಹುದೆ ಎಂದು ನೆನಪಿಸಿಕೊಳ್ಳಲು ನೋಡಿದಳು. ಮನೆಯ ಮುಖ್ಯದ್ವಾರದ ಕಡೆಗೆ ನಡೆದಾಗ ಅವಳ ಭಯಕ್ಕೆ ಇದು ಒಂದು ಎಂಬಂತೆ ಡೋರ್ ಲಾಕ್ ಆಗಿರಲಿಲ್ಲ. ತಿಂಡಿಯನ್ನು ಒಬ್ಬ ಕಳ್ಳ ಕದ್ದಿರುವುದು ಸುಳ್ಳು. ಆದರೆ ತನ್ನ ಆಭರಣಗಳ ಕಳುವಿಗೆ ಆತನೇ ಕಾರಣವಾಗಿರಬಹುದೆ ಎಂಬ ಯೋಚನೆ ಸುಳಿಯಿತು. ಆದರೆ ಹಗಲು ಹೊತ್ತಿನಲ್ಲಿ ಮನೆಗೆ ಯಾರು ನುಗ್ಗಿರಬಹುದು. ಮೊದಲು ಜಯಂತನಿಗೆ ಕರೆ ಮಾಡಿ ತಿಳಿಸುವುದು ಎಂದು ಕೊಂಡರೂ ಮಾಡಲಿಲ್ಲ. ಸೋಫಾದ ಮೇಲೆ ಅದನ್ನೇ ಯೋಚಿಸುತ್ತಾ ಇದ್ದವಳಿಗೆ ಮತ್ತೆ ನಿದ್ದೆ ಬಂದಿದ್ದು ತಿಳಿಯಲಿಲ್ಲ.
ಆಗಲೇ ಏಳು ಮೂವತ್ತಾಗಿತ್ತು. ಜಯಂತ್ ರಾತ್ರಿಯ ಊಟಕ್ಕೆ ಎಂದಿಗೂ ಮನೆಗೆ ಬಂದಿರಲಿಲ್ಲ. ಆ ದಿನ ಸುಸ್ತಾಗಿದ್ದರಿಂದ ಕೆಲವು ಬ್ರೆಡ್ಗಳನ್ನಷ್ಟೇ ತೆಗೆದುಕೊಂಡು ಒಂದು ತುಂಡನ್ನು ಬಾಯಿಗಿರಿಸುವಷ್ಟರಲ್ಲಿ ಬಾಗಿಲು ರಿಂಗ್ ಆಯಿತು. ಅವಳು ಸ್ವಲ್ಪ ಹಿಜರಿಯುತ್ತಲೆ ಕದವನ್ನು ತೆರೆದಳು. ಆಶ್ಚರ್ಯವೆಂಬಂತೆ ಜಯಂತ್ ಅಲ್ಲಿ ನಿಂತಿದ್ದ. ಬಾಯಲ್ಲಿದ್ದ ಬ್ರೆಡ್ಡಿನ ತುಂಡನ್ನು ನುಂಗಿ ಮುಗುಳ್ನಗುವಷ್ಟರಲ್ಲಿ ಅವಳ ನಗುವಿಗಾಗಿ ಕಾಯದೇ ಒಳಗಡೆ ಬಂದ.
ಅಂದು ಮದ್ಯಾಹ್ಮ ನಡೆದ ಘಟನೆಯನ್ನು ಆತನಿಗೆ ಹೇಳಬೇಕೆಂದುಕೊಳ್ಳುವಷ್ಟರಲ್ಲಿ ಅಡುಗೆ ಮನೆಗೆ ನುಗ್ಗಿದ ಜಯಂತ್ ಕಾಫಿ ಸಿದ್ದಪಡಿಸಿಕೊಂಡ.
"ಊಟ ಆಯ್ತಾ?"
"ಆಯ್ತು", ಕಣ್ಣು ಮಾತ್ರ ಮೊಬೈಲ್ ಮೇಲೆ ಇತ್ತು.
"ನಾನು ನಿಮ್ ಹತ್ರ ಮಾತಾಡ್ಬೇಕು."
"ನೀನು ಈಗಾಗಲೇ ನನ್ನೊಂದಿಗೆ ಮಾತಾಡ್ತಾ ಇದ್ದೀಯಾ ಅಂದ್ಕೊಳ್ತೀನಿ", ಈಗಲೂ ಕೂಡ ಮೊಬೈಲ್ ಮೇಲೆ ಧ್ಯಾನ.
"ಈ ರೀತಿಯಾಗಿ ಅಲ್ಲ. ಸ್ವಲ್ಪ ಸೀರಿಯಸ್ ಮ್ಯಾಟರ್."
ಮೊಬೈಲ್ ತೆಗೆದು ಪಕ್ಕಕ್ಕೆ ಇತ್ತು, ತಾನು ಅವಳ ಮಾತನ್ನು ಕೇಳಿಸಿಕೊಳ್ಳಲು ರೆಡಿ ಎಂಬಂತೆ ಕೈಕಟ್ಟಿ ಕುಳಿತು ಅವಳತ್ತಲೆ ನೋಡಿದ.
"ಕಳೆದ ಕೆಲವು ದಿನಗಳಿಂದ ಯಾರೋ ನಮ್ ಮನೆ ಒಳಗೆ ಯಾರೋ ಬರ್ತಾ ಇದ್ದಾರೆ ಅನ್ಸ್ತಾ ಇದೆ. ನನ್ನನ್ನ ಅವನು ಫಾಲೋ ಮಾಡ್ತ ಇದಾನೆ ಅಂತ ಕಾಣುತ್ತೆ. ನಾನು ಇಲ್ಲೆ ಇದ್ದಾಗ್ಲೇ ಯಾರೋ ಓಡಾಡ್ತಾ ಇದ್ದರೆ ಅನ್ನೋ ತರ ಆಗ್ತಿದೆ."
"ನಿನ್ನ ಇಮ್ಯಾಜಿನೇಶನ್ ನ ಸ್ಟಾಪ್ ಮಾಡು. ಎಲ್ಲವೂ ಸರಿ ಆಗುತ್ತೆ."
"ಇಲ್ಲ. ಇಲ್ಲ. ನನಗೆ ಸ್ವಲ್ಪ ಮಟ್ಟಿಗೆ ಖಚಿತ ಆಗಿದೆ. ಹಾಗೆ ಸ್ವಲ್ಪ ಕನ್ಫೂಸ್ ಕೂಡ ಆಗಿದೆ. ಡೈನಿಂಗ್ ಟೇಬಲ್ ಮೇಲೆ ತಿಂಡಿ ಇಟ್ಟಿದ್ದು ನನಗೆ ಚೆನ್ನಾಗಿ ನೆನ್ಪಿದೆ. ಆದ್ರೆ ಮದ್ಯಾಹ್ನ ನೋಡ್ದಾಗ ಅಲ್ಲಿ ಇರ್ಲಿಲ್ಲ. ಯಾರೋ ತಿಂದು ಹೋಗಿದ್ರು."
"ಓಹೋ. ಯಾರೋ ನಿನ್ನ ತಿಂಡಿಯನ್ನ ಕದ್ದು ತಿನ್ನಲಿಕ್ಕೆ ಮನೆಗೆ ಹೊಕ್ಕು ನಿನ್ನ ಫಾಲೋ ಮಾಡ್ತಾರೆ? ಎಲ್ಲೋ ಹುಚ್ಚು ನಿನಗೆ."
"ಜಯಂತ್. ಪ್ಲೀಸ್. ಆಮ್ ಸೀರಿಯಸ್. ನನ್ನ ಸರ ಕಳ್ಳತನ ಕೂಡ ಹೀಗೆ ಆಗಿದ್ದು."
"ನೋಡು.. ನೀನೇ ಕಲ್ಪನೆ ಮಾಡಿಕೊಳ್ತಾ ಇರೋದು. ಎಲ್ಲ ಅಸಂಪ್ಶನ್ಸ್. ಅದೇ ಪ್ರಾಬ್ಲಮ್."
"ಜಯಂತ್.. ಯಾಕೆ ನನ್ನ ಅರ್ಥ ಮಾಡ್ಕೊಳ್ತಾ ಇಲ್ಲ. ನಾನು ಇಷ್ಟು ಸೀರಿಯಸ್ ವಿಷ್ಯ ಹೇಳ್ತ ಇದೀನಿ. ನೀವು ಹೀಗೆ ನನ್ನೇ ದೂಷಿಸ್ತ ಇರೋದು..", ಮಾತು ಪೂರ್ಣಗೊಳಿಸುವ ಮೊದಲೇ ಅಳತೊಡಗಿದಳು.
"ಹಾ.. ನನ್ನ ದೂಷೀಸ್ಬೇಡಿ. ನನ್ನ ಬೈಯ್ಬೇಡಿ. ನನಗೆ ನೋವು ಮಾಡ್ಬೇಡಿ. ಯಾವಾಗ್ಲೂ 'ನಾನು, ನನಗೆ' ಅಷ್ಟೇ ತಾನೇ?”, ಎತ್ತರಿಸಿದ ದ್ವನಿಯಲ್ಲಿ ಕೇಳಿದ.
ಕಣ್ಣೀರು ಅವಳ ಕೆನ್ನೆಯ ಮೇಲೆ ಓಡಿತು. ಜಯಂತ್ ಮುಂದುವರೆಸಿದ, "ನನ್ನ ಸುತ್ತಲೂ ಆಗ್ತಾ ಇರೋದೆಲ್ಲಾ ನನಗೆ ಖುಷಿ ಕೊಡ್ತಾ ಇರೋ ಹಾಗೆ ಆಡ್ತೀಯಾ. ನಿನ್ನ ಇಮ್ಯಾಜಿನೇಶನ್ ನಿಲ್ಸಿ ಊಟ ಮಾಡು. ಬೇಡ ಅಂತಾದ್ರೆ ಹೋಗಿ ಮಲಗು.", ಆರ್ಡರ್ ಮಾಡಿದವಂತೆ ಹೇಳಿ ಮೆಟ್ಟಿಲು ಹತ್ತಿ ತನ್ನ ರೂಮಿನೆಡೆಗೆ ದಾಪುಗಾಲಿಟ್ಟ.
ಸಂಧ್ಯಾ ಅಸಹಾಯಕಳಾಗಿ ಅಳುತ್ತಾ ನಿಂತಳು. ಅವನ ಮೇಲೆ ಕೋಪ ಬಂದಿತ್ತು. ಅವನಿಗೆ ಸಿಟ್ಟು ಬರಿಸಿದ ತನ್ನ ನಡೆಗೆ ತನ್ನ ಮೇಲೆ ತಾನು ಬೇಸರಗೊಂಡಳು. ಮುಖ ಮುಚ್ಚಿಕೊಂಡು ಸೋಫಾದ ಮೇಲೆ ಕುಳಿತು ಅಳುತಿದ್ದಳು. ನಿದ್ದೆ ಅವಳನ್ನು ನಿಧಾನವಾಗಿ ಆವರಿಸಿತು.
ರಾತ್ರಿ ಏನೋ ಶಬ್ದವಾಗಿ ಜಯಂತ್ ಎಚ್ಚರಗೊಂಡ. ಕುರ್ಚಿಯನ್ನು ಎಳೆದ ಶಬ್ದ..! ಅದು ಎಲ್ಲಿಂದ ಬಂತು ಎಂದು ತಿಳಿಯಲಿಲ್ಲ. "ಹಾ. ಮತ್ತೆ ಇದು ಆಗಲ್ಲ" ಎಂದು ತಲೆಗೆ ಕೈಯಾನಿಸಿ ಮಲಗಿದ. ಮತ್ತೆ ಕಿವಿಗೆ ಬಿತ್ತು ಶಬ್ದ ಮತ್ತೊಮ್ಮೆ...! ಈ ಬಾರಿ ಬಾಗಿಲಿನ ಚಿಲಕ ಸರಿಸಿದ ಸದ್ದು. ಈಗ ಮಾತ್ರ ಜಯಂತ್ ಅದುರಿಹೋದ.
ಕೂಡಲೇ ಕೆಳಗೆ ಇದ್ದ ಹಾಲ್ ಗೆ ಓಡಿ ಹೋದ. ಎಲ್ಲವೂ ಶಾಂತವಾಗಿ, ಸಹಜವಾಗಿತ್ತು. ಸಂಧ್ಯಾ ಸೋಫಾದ ಮೇಲೆ ನಿದ್ರಿಸುತ್ತಿದ್ದಳು.
ಸಮಾಧಾನವಾಗಿ ರೂಮಿಗೆ ಹಿಂದಿರುಗಬೇಕೆಂದುಕೊಳ್ಳುತ್ತಿರಬೇಕಾದರೆ ಒಂದು ನೆರಳು ಮನೆಯಿಂದ ಹೊರಗೆ ಓಡಿದಂತಾಯಿತು. ಆತನ ದಿಗ್ಬ್ರಮೆ ಉಲ್ಬಣಗೊಳ್ಳುವಂತೆ ಮನೆಯ ಮುಂದಿನ ಬಾಗಿಲಿನ ಲಾಕ್ ತೆರೆದಿತ್ತು. ಯಾರೋ ಈಗ ತಾನೇ ಗಟ್ಟಿಯಾಗಿ ಎಳೆದಂತೆ ಬಾಗಿಲು ಅಲುಗಾಡುತ್ತಿತ್ತು. ಬಾಗಿಲಿನ ಸನಿಹಕ್ಕೆ ಹೋಗಿ ಹೊರಕ್ಕೆ ಇಣುಕಿ ನೋಡಿದ. ಅಪಾರ್ಟ್ಮೆಂಟಿನ ವರಾಂಡದ ಲೈಟ್ ಎಲ್ಲವೂ ಉರಿಯುತ್ತಿತ್ತು. ಆ ದಾರಿ ಸಹಜವಾಗಿಯೇ ತೋರಿತು. ಹಠಾತ್ ಚಲನವಲನದ ಸೂಚನೆಗಳು ಕಂಡುಬರಲಿಲ್ಲ.
ಉಫ್ ಎಂದುಕೊಂಡು ಇನ್ನೇನು ಮನೆಯೊಳಕ್ಕೆ ಹೋಗಬೇಕು ಎಂದುಕೊಳ್ಳುವಷ್ಟರಲ್ಲಿ ಒಂದು ಕಪ್ಪು ಆಕೃತಿ ಮನೆಯೊಳಗೆ ನಿಂತಿರುವುದು ಕಂಡಿತು. ಅದೂ ಕೂಡ ಹೊರಗಿನಿಂದ ಲಾಕ್ ಆಗಿದ್ದ ಮಮತಾ ಅವರ ಮನೆಯ ಒಳಗೆ…!!!. ಇವನತ್ತಲೇ ತಿರುಗತೊಡಗಿದಾಗ ಹತ್ತೇ ಸೆಕೆಂಡುಗಳಲ್ಲಿ ಜಯಂತನ ದೇಹ ಬೆವರಿನಿಂದ ತೊಯ್ದುಹೋಗಿತ್ತು.